Wednesday, August 4, 2010

ಬಿ ವಿ ಪಾಂಡುರಂಗ ರಾವ್, ಜನ್ಮ ಸ್ಥಳ: ಮೈಸೂರು, ೨೦.೯.೧೯೪೪ಸ್ವಂತ ಊರು : ಶಿಡ್ಲ ಘಟ್ಟ
ವಿಧ್ಯಾಭ್ಯಾಸ: ಮೆಕಾನಿಕಲ್ ಇಂಜಿನೀಯರಿಂಗ್ ನಲ್ಲಿ ಡಿಪ್ಲೋಮ
ವ್ಯವಸಾಯ: ೧೯೬೫ ರಿಂದ ೨೦೦೧ ರ ವರೆಗೆ ಮಧ್ಯ ಪ್ರದೇಶದ ಭಿಲಾಯಿ ಉಕ್ಕಿನ ಕಾರ್ಖಾನೆ ಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಹುದ್ದೆಯಲ್ಲಿದ್ದು ಸ್ವಯಂ ನಿವ್ರುತ್ತಿ ಯ ನಂತರ ಬೆಂಗಳೂರಿನಲ್ಲಿ ವಾಸ.ಪ್ರಸ್ತುತ ಹವ್ಯಾಸಿ ವ್ಯಂಗ್ಯಚಿತ್ರಕಾರಮಾಜಿ ಅಧ್ಯಕ್ಷರು , ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘಸದಸ್ಯರು: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ಬೆಂಗಳೂರು
ಹವ್ಯಾಸ
ವ್ಯಂಗ್ಯಚಿತ್ರ ರಚನೆ:
೨೦೦೦ ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳ ಪ್ರಕಟಣೆ. ಪ್ರಜಾವಾಣಿ, ಉದಯವಾಣಿ, ವಿಜಯ ಕರ್ನಾಟಕ, ಉಷಾಕಿರಣ, ಮಲ್ಲಿಗೆ, ಕಸ್ತೂರಿ, ಗೋಕುಲ, ಜನಪ್ರಗತಿ, ಸುಧಾ, ತರಂಗ, ನಗೆ ಮುಗುಳು, ವಾರೆಕೊರೆ, ಸೂರ್ಯೋದಯ ಪತ್ರಿಕೆಗಳಲ್ಲಿ ಪ್ರಕಟಣೆ. ಭಿಲಾಯಿ ಉಕ್ಕಿನ ಸ್ಥಾವರದ ಗೃಹ ಪತ್ರಿಕೆಗಳಲ್ಲಿ, ಆಂಗ್ಲ ಪತ್ರಿಕೆ ಹಿತವಾದ ಮತ್ತು ಹಿಂದೀ ಪತ್ರಿಕೆಗಳಾದ ದೈನಿಕ್ ಭಾಸ್ಕರ್, ನವ್ ಭಾರತ್, ದೇಶಬಂಧು, ಕಾರ್ಟೂನ್ ವಾಚ್, ತುಳಸಿ ಮುಂತಾದ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳ ಪ್ರಕಟಣೆ
ಬಹುಮಾನ ಮತ್ತು ಪ್ರಶಸ್ತಿಗಳು:
ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಬಹುಮಾನ / ಪ್ರಶಸ್ತಿ ಗಳು.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ೧೨ ಬಾರಿ ಪ್ರಶಸ್ತಿಗಳು
ಅಂತರ ರಾಷ್ಟ್ರೀಯ ಮಟ್ಟದಲ್ಲಿ: ಕೊರಿಯಾ, ಕ್ರೊಯೇಶಿಯ, ಟರ್ಕಿ, ತೈವಾನ್, ಇಸ್ರೇಲ್, ರಷ್ಯಾ, ಸೈಪ್ರಸ್, ಸರ್ಬಿಯಾ, ಪೋರ್ಚುಗಲ್ ಮುಂತಾದ ದೇಶಗಳಲ್ಲಿ ಏರ್ಪಡಿಸಿದ ಅಂತರ ರಾಷ್ಟ್ರೀಯ ವ್ಯಂಗ್ಯಚಿತ್ರ ಪ್ರದರ್ಶನಗಳಲ್ಲಿ ೨೫ ಕ್ಕೂ ಹೆಚ್ಚು ಬಾರಿ ಆಯ್ಕೆ ಯಾಗಿದ್ದು ಹಾಗು ಆಯಾಯ ದೇಶಗಳು ಹೊರತಂದ ವ್ಯಂಗ್ಯಚಿತ್ರ ಸಂಕಲನದಲ್ಲಿ ಪ್ರಕಟನೆ.
ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನ; ದೇಶದ ವಿವಿಧ ಭಾಗಗಳಲ್ಲಿ ಒಟ್ಟು ೩೭ ಬಾರಿ ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನ.
ಈ ಸಾಧನೆಗಳನ್ನು ರಾಷ್ಟ್ರೀಯ ದಾಖಲೆಯೆಂದು ಗುರುತಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ೨೦೧೦, ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರಿಸಲಾಗಿದೆ.
ವೀಶೇಷ: ಇವರು ರಚಿಸಿದ ಅತಿ ಸಣ್ಣ ಪುಸ್ತಕ " ಫ್ಲಿಪ್ ಬುಕ್ ಅನಿಮೇಶನ್" ರಾಷ್ಟ್ರೀಯ ದಾಖಲೆ ಯೆಂದು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ರವರು ಪ್ರಮಾಣ ಪತ್ರ ನೀಡಿದ್ದಾರೆ.
ಗಿನ್ನೆಸ್ ದಾಖಲೆಗಾಗಿ ಬೆಂಗಳೂರು ಪಬ್ಲಿಕೇಶನ್ಸ್ ರವರು ತಯಾರಿಸಿದ ಅತಿ ದೊಡ್ಡ ಪುಸ್ತಕದಲ್ಲಿ ೬ ವ್ಯಂಗ್ಯಚಿತ್ರಗಳನ್ನು ಸೇರಿಸಲಾಗಿದೆ.
ವ್ಯಂಗ್ಯಚಿತ್ರ ಕಲಾ ಶಿಬಿರ:
ಸುಮಾರು ೩೦೦೦ ಪ್ರತಿಭಾವಂತ ಮಕ್ಕಳಿಗೆ ವ್ಯಂಗ್ಯಚಿತ್ರದ ಬಗ್ಗೆ ತಿಳುವಳಿಕೆ ನೀಡಲಾಗಿದೆ.
ಟಿ.ವಿ ಯಲ್ಲಿ ಸಂದರ್ಶನ:
ದೆಹಲಿ ದೂರದರ್ಶನದ ಜಾನೆ ಅಂಜಾನೆ, ಚಂದನ ವಾಹಿನಿ ಯ ಬೆಳಗು ಕಾರ್ಯಕ್ರಮದಲ್ಲಿ, ಗೆರೆ ಬರೆ ಯಲ್ಲಿ, ಉದಯ ನ್ಯೂಸ್ ನಲ್ಲಿ, ಬೆಂಗಳೂರು ಸಿಟಿ ವಾಹಿನಿಯಲ್ಲಿ ಸಂದರ್ಶನ.
ಕ್ರೀಡೆ:
ಕ್ರಿಕೆಟ್ ಕ್ರೀಡೆಯಲ್ಲಿ ಉಕ್ಕಿನ ಸ್ಥಾವರದ ಪರವಾಗಿ ೧೨ ವರುಷ ಪ್ರತಿನಿಧಿತ್ವ. ಕ್ರಿಕೆಟ್ ಕ್ರೀಡೆಯಲ್ಲಿ ಮಧ್ಯ ಪ್ರದೇಶ ವಿಭಾಗದ ಪಂದ್ಯಗಳಲ್ಲಿ ಪ್ರತಿನಿಧಿತ್ವ.
ಮಧ್ಯ ಪ್ರದೇಶ ಮಟ್ಟದ ಕ್ರಿಕೆಟ್ ಅಂಪೈರ್ ಆಗಿ ವಿಭಾಗೀಯ ಮತ್ತು ಅಖಿಲ ಭಾರತ ಪಂದ್ಯ ಗಳಲ್ಲಿ ೨೦ ವರುಷಗಳ ಕಾಲ ಸೇವೆ.
ಹಿರಿಯರ ವಿಭಾಗದಲ್ಲಿ ಮಧ್ಯ ಪ್ರದೇಶ ಮತ್ತು ಕರ್ನಾಟಕ ರಾಜ್ಯ ಮಟ್ಟದ ಬ್ಯಾಡ್ ಮಿಂಟನ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.
ವಿಳಾಸ:
ಬಿ.ವಿ ಪಾಂಡುರಂಗ ರಾವ್
ವ್ಯಂಗ್ಯಚಿತ್ರಕಾರ
೧೯೧, ಎ.ಎಮ್ ಎಸ್ ಬಡಾವಣೆ
ವಿದ್ಯಾರಣ್ಯಪುರ
ಬೆಂಗಳೂರು- ೫೬೦೦೯೭
೯೮೮೦೧೨೪೫೫೧

No comments:

Post a Comment